Tuesday, 9 July 2013

ಪ್ರಶ್ನೆ

                        
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 
ಪ್ರಶ್ನೆ ಒಂದು ಹೀಗಿತ್ತು 
ಪೋಲಿಸು ಮತ್ತು ಮಾಸ್ತರ್ರಲ್ಲಿ 
ವ್ಯತ್ಯಾಸ ನಿನಗೇನು ಗೊತ್ತು?
ಎಷ್ಟೋ ಉತ್ತರಗಳಲ್ಲಿ 
ಒಂದು ಉತ್ತರ ಹೀಗಿತ್ತು 
"ಒಬ್ಬ ಒದ್ದು ಒಳಗೆ ಹಾಕ್ತಾನೆ 
ಇನ್ನೊಬ್ಬ ಒದ್ದು ಹೊರಗೆ ಹಾಕ್ತಾನೆ"

ಚಮತ್ಕಾರ



ನೀಚ ರಾಜಕಾರಣಿ ಒಬ್ಬ 
ರಾವಣನ ಗೊಂಬೆಯನು 
ಸುಡುಬಾಣದಿಂದ ಸುಟ್ಟ 
ಅಲ್ಲೇ ಇದ್ದ ಒಬ್ಬ ಪ್ರೇಕ್ಷಕನಂದ 
ಏನು ಚಮತ್ಕಾರ !
ಒಬ್ಬ ರಾವಣ ಇನ್ನೊಬ್ಬ 
ರಾವಣನ ಮೇಲೆ ಬಾಣ ಬಿಟ್ಟ 

ಪಾತಕಿ




ಹೆಣ್ಣು ಭ್ರೂಣ ಹತ್ಯೇ ಮಾಡಿ 
ನೀನಾಗ ಬೇಡ ಕೊಲೆ ಪಾತಕಿ 
ಹಾಗಾಗಿದ್ದರೆ ಹುಟ್ಟುತಿದ್ದರೆ 
ದಮಯಂತಿ, ಅಹಲ್ಯಾ, ಜಾನಕಿ  

Monday, 8 July 2013

ವಿಚಿತ್ರ




ಇದ್ದಾಗ ಬಾಯಿ ಮುಚ್ಚಿ 
ಬಿದ್ದಿರು ಎನ್ನುವರು 
ಬಿದ್ದು ಹೋದಾಗ 
ಎದ್ದು ಬಾ ಎಂದು ಅಳುವರಲ್ಲ
ಎಂಥ "ವಿಚಿತ್ರ "

ಕೃತಜ್ಞರು



ಹೆತ್ತಳಾ ತಾಯಿ 
ಹತ್ತು ಮಕ್ಕಳನ್ನು 
ಬೆಳೆಸಿದಳು ಅವರಿಗೆ 
ಭೂತಾಯಿಯಂತೆ 
ಇವಳಿಗೆ ಮುಪ್ಪು 
ಅವರಿಗೆ ಹರೆಯ ಬಂದಾಗ 
ಇವಳೇ ಅವರಿಗೆ ಭಾರವಾದಳಂತೆ 

Wednesday, 3 July 2013

ನಾಚಿ ನೀರು ಪಾಲು



ಅವಳು ನನ್ನನು ನೋಡಿ  ನಾಚಿ ನೀರಾದಳು
ಅವಳನ್ನು ಬಾಚಿಕೊಳ್ಳಲು  ಹೋಗಿ ನೀರಿಗೆ ಧುಮುಕಿ
ನಾನು ನೀರು ಪಾಲಾದೆನು